
13th September 2025
ಬೆಳವಡಿ- ದೇವಲಾಪುರ ಗ್ರಾಮದಲ್ಲಿ ಸೋಯಾಬಿನ್ ಬೆಳೆಯ ಕ್ಷೇತ್ರ ಪಾಠಶಾಲೆ ಹಾಗೂ ರಾಷ್ಟ್ರೀಯ ಖಾದ್ಯ ತೈಲ ಎಣ್ಣೆ ಕಾಳು ಅಭಿಯಾನದಡಿ ಎಣ್ಣೆಕಾಳು ಬೆಳೆಗಳ ಸಮಗ್ರ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ರೈತ ಗೀತೆಯೊಂದಿಗೆ ಕಾರ್ಯಕ್ರಮ ಶುರುವಾಯಿತು.ಸಸಿಗೆ ನೀರು ಉಳಿಸುವುದರ ಮುಖಾಂತರ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಾದ ಎಚ್ ಡಿ ಕೋಳೆಕರ್ ಅವರು ನೆರವೇರಿಸಿದರು.ಕಾರ್ಯಕ್ರಮದ ಕುರಿತಾಗಿ ಪ್ರಾಸ್ತಾವಿಕವಾಗಿ ಆತ್ಮ ತಾಲೂಕು ತಾಂತ್ರಿಕ ವ್ಯವಸ್ಥಾಪಕರಾದ ಚಂದ್ರಕಾಂತ್ ಮರಡಿ ಅವರು ರೈತ ಕ್ಷೇತ್ರ ಪಾಠ ಶಾಲೆ ಅಧಿವೇಶನಗಳ ಉಪಯೋಗ ತರಬೇತಿ ಹಾಗೂ ಎಣ್ಣೆ ಕಾಳು ಬೆಳೆಗಳ ಅವಶ್ಯಕತೆ ಕುರಿತು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಕೆಎಲ್ಇ ಕೆ ವಿ ಕೆ ಮತ್ತಿಕೊಪ್ಪದ ಬೇಸಾಯ ತಜ್ಞರಾದ ಜಿ ಬಿ ವಿಶ್ವನಾಥ್ ಅವರು ಎಣ್ಣೆಕಾಳು ಬೆಳೆಗಳ ಸಮಗ್ರ ನಿರ್ವಹಣೆ ಹಾಗೂ ಹಿಂಗಾರು ಹಂಗಾಮಿನ ಕಡಲೆ ಬೆಳೆ ನಿರ್ವಹಣೆ ಕುರಿತು ರೈತರಿಗೆ ತರಬೇತಿ ನೀಡಿದರು.ತದನಂತರ ಬೆಳಗಾವಿಯ ಉಪ ಕೃಷಿ ನಿರ್ದೇಶಕರಾದ ಸಲೀಂ ಸಂಗತ್ರಾಸ್ ಅವರು ಮಾತನಾಡಿ ಕಡಿಮೆ ಖರ್ಚಿನಲ್ಲಿ ಕೃಷಿಯನ್ನ ಹೇಗೆ ಲಾಭದಾಯಕವಾಗಿ ಮಾಡಿಕೊಳ್ಳುಬೇಕೆಂಬುದರ ಕುರಿತಾಗಿ ರೈತರಿಗೆ ಮನವರಿಕೆ ಮಾಡಿದರು.ಈ ಒಂದು ಕ್ಷೇತ್ರ ಪಾಠ ಶಾಲೆಯ ರೂವಾರಿ ಹಾಗೂ ಸಂಪನ್ಮೂಲ ವ್ಯಕ್ತಿ ನಿವೃತ್ತ ಕೃಷಿ ಅಧಿಕಾರಿಗಳಾದ ವಿ ಎಮ್ ಹೊಸೂರ್ ಅವರಿಗೆ ವೇದಿಕೆ ಮೇಲಿರುವ ಗಣ್ಯರು ಸನ್ಮಾನ ಮಾಡಿದರು ಹಾಗೆ ಸನ್ಮಾನ ಸ್ವೀಕರಿಸಿದ ವಿ ಎಮ್ ಹೊಸೂರ್ ಅವರು ರೈತರೊಂದಿಗೆ ತಮ್ಮ ಕೃಷಿ ಅನುಭವಗಳನ್ನು ಹಂಚಿಕೊಂಡರು.ತದನಂತರ ಬೈಲಹೊಂಗಲ ಸಹಾಯಕ ಕೃಷಿ ನಿರ್ದೇಶಕರಾದ ಬಸವರಾಜ್ ದಳವಾಯಿ ಅವರು ಮಾತನಾಡಿ ಮಣ್ಣಿನ ಫಲವತ್ತತೆಯನ್ನು ಪ್ರತಿಯೊಬ್ಬ ರೈತರು ಕಾಪಾಡಿಕೊಳ್ಳಬೇಕು ಅದನ್ನು ಹೆಚ್ಚಿಸಲು ಭೂಮಿಯಲ್ಲಿ ನಾವು ಸೂಕ್ಷ್ಮಾಣು ಜೀವಿಗಳನ್ನು ಹಾಕಬೇಕು ಮತ್ತು ಜೈವಿಕ ಗೊಬ್ಬರಗಳನ್ನ ಬಳಸಬೇಕೆಂದು ರೈತರಿಗೆ ತಿಳಿಹೇಳಿದರು..ರೈತ ಕ್ಷೇತ್ರ ಪಾಠ ಶಾಲೆಯ 14 ಅಧಿವೇಶನಗಳನ್ನು ಮುಗಿಸಿದ ರೈತ ಫಲಾನುಭವಿಗಳಿಬ್ಬರು ತಮ್ಮ ತರಬೇತಿಗಳ ಅನುಭವವನ್ನು ಹಂಚಿಕೊಂಡರು.ತದನಂತರ ಕಾರ್ಯಕ್ರಮದ ಕುರಿತಾಗಿ ಮಾತನಾಡಿದ ಜಂಟಿ ಕೃಷಿ ನಿರ್ದೇಶಕರು ಎಚ್ ಡಿ ಕೊಳೇಕರ್ ಅವರು ರೈತಬಾಂಧವರು ಸಾವಯುವ ಮತ್ತು ನೈಸರ್ಗಿಕ ಕೃಷಿಗೆ ಅತಿ ಹೆಚ್ಚು ಒತ್ತು ಕೊಡಬೇಕಾದ ಪರಿಸ್ಥಿತಿ ಇವತ್ತಿನ ದಿನಮಾನದಲ್ಲಿ ಬಹಳ ಇದೆ.ಕೃಷಿ ಯಾವತ್ತಿಗೂ ಸರಿಯಾದ ರೀತಿಯಲ್ಲಿ ಸರಿಯಾದ ವ್ಯವಸ್ತೆಯಿಂದ ಆಗಬೇಕು.ರೈತರು ಯಾವಾಗಲೂ ಕೃಷಿ ಅಧಿಕಾರಿಗಳು ಹಾಗೂ ವಿಜ್ಞಾನಿಗಳಿಂದ ಮಾಹಿತಿ ಪಡೆದುಕೊಂಡು ಕೃಷಿಯಲ್ಲಿ ತೊಡಗಬೇಕು ಮತ್ತು ಎಚ್ಚೆತ್ತು ಕೃಷಿ ತರಬೇತಿಗಳಲ್ಲಿ ಭಾಗವಹಿಸಬೇಕೆಂದು ಹೇಳಿ ಧರ್ತಿ ಭಾರತ ಬಚಾವೋ ಆಂದೋಲನ ಕುರಿತು ಪ್ರಚಾರ ಗೈದು ಇಲಾಖೆಯ ಹಲವು ಯೋಜನೆಗಳ ಕುರಿತು ಮಾಹಿತಿ ಹೇಳಿದರು.ವಿಷಯ ತಜ್ಞರಾದ ಸಿ ಐ ಹೂಗಾರ್ ಅವರು ಮಾತನಾಡಿ ಮಣ್ಣಿನ ಆರೋಗ್ಯ ಹಾಗೂ ಪೋಷಕಾಂಶಕಗಳ ಕುರಿತು ರೈತರಿಗೆ ಮನದಟ್ಟು ಮಾಡಿದರು.ವಂದನಾರ್ಪಣೆಯನ್ನು ಕೃಷಿ ಅಧಿಕಾರಿಗಳಾದ ಶ್ರೀ ಯಮನಪ್ಪ ಮಾದಿಗರ್ ಅವರು ನೆರವೇರಿಸಿ ಕೊಟ್ಟರು.ಕೊನೆಯಲ್ಲಿ ಎಲ್ಲಾ ರೈತರನ್ನು ಪಾಠಶಾಲೆ ದಾನಿ ರೈತನ ಕೃಷಿ ಪ್ರಾತ್ಯಕ್ಷಿಕೆ ತಾಕಿಗೆ ಭೇಟಿ ಮಾಡಿಸಲಾಯಿತು ಹಾಗೂ ತಾನು ಕ್ಕೆಗೊಂಡಿರುವ ಕೃಷಿ ಚಟುವಟಿಕೆಗಳ ಕುರಿತು ಉಳಿದ ರೈತರಿಗೆ ಅನುಸರಿಸಲು ಮಾಹಿತಿ ನೀಡಿದರು.ಈ ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ಅಧಿಕಾರಿಗಳಾದ ಬಿಕೆ ಜಮಾದಾರ್, ಪಂಚಾಯತ್ ಅಧ್ಯಕ್ಷರಾದ ಜಯರಾಬಿ ನದಾಫ್, ಕೃಷಿ ಅಧಿಕಾರಿ ಎಸ್ಎಫ್ ಪೂಜೇರ, ನಿವೃತ್ತ ಕೃಷಿ ಅಧಿಕಾರಿ ಚೆನ್ನಪ್ಪ ಬಂದ ಕನವರ, ಕೃಷಿ ಸಂಜೀವಿನಿ ಸಿಬ್ಬಂದಿ, ಕೃಷಿ ಸಖಿ ದೀಪಾ ಸಾಧನವರ್,ದೇವಲಾಪುರ ರೈತ ಬಾಂಧವರು ಹಾಗೂ ರೈತ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಗಣಪತಿ ಮೆರವಣಿಗೆ ಡಿಜೆಗೆ ಪೊಲೀಸರ ಆಕ್ಷೇಪ ಲಾಠಿ ಏಟು: ಪೊಲೀಸರ ವಿರುದ್ಧ ಯುವಕರ ಆಕ್ರೋಶ
ಪರೀಕ್ಷೆ ಮತ್ತು ಕ್ರೀಡಾಕೂಟ ಒಂದೇ ದಿನ ಆಯೋಜನೆ- ಕ್ರೀಡಾ ಮತ್ತು ಶಿಕ್ಷಣ ಇಲಾಖೆಗಳ ಸಮನ್ವಯ ಕೊರತೆ -ಅಧಿಕಾರಿಗಳ ಎಡವಟ್ಟಿಗೆ ವಿದ್ಯಾರ್ಥಿಗಳಲ್ಲಿ ಆತಂಕ